ಸಕಲ ಪೂಜಾ ಸರ್ವ ವಿಧಿ-ವಿಧಾನಗಳು:
ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಎಲ್ಲಾ ಪೂಜಾ ಕಾರ್ಯಗಳೂ ಸಾಂಗವಾಗಿ ನಡೆಸಿ, ಬರುವ ಭಕ್ತ-ವೃಂದಕ್ಕೆ ಶ್ರೀ ದೇವರ ಮುಡಿ ಗಂಧ-ಪ್ರಸಾದವನ್ನು ನೀಡಲಾಗುತ್ತದೆ. ಪ್ರತೀ ಶನಿವಾರ ಮತ್ತು ಸೋಮವಾರ ಅನ್ನಸಂತರ್ಪಣೆ ಇರುತ್ತದೆ. ತುಲಾಭಾರ ಸೇವೆಯೂ ಕೂಡ ಶ್ರೀ ಕ್ಷೇತ್ರದಲ್ಲಿ ಆಚರಣೆಯಿದೆ. (ಪ್ರತೀ ಶನಿವಾರ ವಿಶೇಷಪೂಜೆ, ಮಹಾಅನ್ನಸಂತರ್ಪಣೆ ಹಾಗೂ ಮಧ್ಯಾಹ್ನ 12 ಗಂಟೆಯ ಮಹಾಪೂಜೆಯ ನಂತರ ಮಹಾ ಅನ್ನದಾನ ನಡೆಯುವುದರ ಜೊತೆಗೆ, ಶ್ರೀ ದೇವರ ದರುಶನ ಸೇವೆಯ ಭಾಗ್ಯವಿದ್ದು ಭಕ್ತರು ತಮ್ಮ ಹೇಳಿಕೆ-ಕೇಳಿಕೆ-ಸಮಸ್ಯೆಗಳನ್ನು ದೇವರ ಮುಂದಿಡುವ ಅವಕಾಶವಿರುತ್ತದೆ.) ಪ್ರತಿ ತಿಂಗಳಿಗೊಮ್ಮೆ ಶನಿವಾರದಂದು, ಶನಿಶಾಂತಿ ಮತ್ತು ನವಗ್ರಹ ಶಾಂತಿ ಬ್ರಾಹ್ಮಣೋತ್ತಮರ ಮುಖೇನ ಶ್ರೀ ದೇವರ ಸಾನ್ನಿಧ್ಯದಲ್ಲಿ ಸಾಂಗವಾಗಿ ನಡೆಯುತ್ತದೆ. ಪ್ರತಿ ಹುಣ್ಣಿಮೆ, ಅಮವಾಸ್ಯೆ, ಹಾಗೂ ಸಂಕ್ರಾತಿಯಂದು ಶ್ರೀ ಚೌಡೇಶ್ವರಿ ದೇವಿಗೆ ದುರ್ಗಾಹೋಮ ವಿಶೇಷ ಸೇವಾ ಪೂಜೆಯೂ ನಡೆಯುವುದರ ಜೊತೆಗೆ, ಶ್ರೀ ದೇವಿಯ ದರ್ಶನ ಸೇವೆಯಿರುತ್ತದೆ. ಹಾಗೂ, ಪ್ರತಿ ಶ್ರಾವಣದಿನದಂದು ಸೋಣೆಯಾರತಿ ಸೇವೆ ನಡೆಯುತ್ತದೆ. "ಶ್ರೀ ಶನೀಶ್ವರನ ಕಥಾ ಪ್ರವಚನವು ಹಾಗೂ ಇಸ್ಟಮಿ ಕಥೆ"ಯನ್ನು ವರ್ಷಂಪ್ರತಿ ನಡೆಯುವ ಸೇವೆಯಾರ್ಥವಾಗಿ, ಶ್ರೀ ಕ್ಷೇತ್ರದ ಸನ್ನಿಧಾನದಲ್ಲಿ ಪ್ರತಿವರ್ಷಕ್ಕೊಮ್ಮೆ ನಡೆಸಲಾಗುತ್ತಿದೆ.
ಶ್ರೀಕ್ಷೇತ್ರದಲ್ಲಿ "ಜಾತ್ರಾ ರಥೋತ್ಸವ" ಮಾಘಮಾಸ ಉತ್ತರ ನಕ್ಷತ್ರ ಪ್ರತಿ ವರ್ಷ ಶಿವರಾತ್ರಿ ತಿಂಗಳಲ್ಲಿ ನಡೆಯುತ್ತದೆ
ವರ್ಷದ ವಿಶೇಷ ಪೂಜೆ ದಿನಗಳು
ಪ್ರತಿ ತಿಂಗಳ ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ವಿಶೇಷ ಪೂಜೆ ನಡೆಯಲಿದ್ದು ತಮ್ಮ ಗೌಪ್ಯ ಸಮಾಸ್ಯೆಗಳ ಬಗ್ಗೆ ಸನ್ನಿದಿಯಲ್ಲಿ ಹರಕೆ ಇಟ್ಟು ಸಂಕಲ್ಪ ಮಾಡಬಹುದು.
- ಜನವರಿ - ಮಕರ ಸಂಕ್ರಾಂತಿ ವಿಶೇಷ ಪೂಜೆ
- ಮಹಾ ಶಿವರಾತ್ರಿ ವಿಶೇಷ ಪೂಜೆ
- ಹನುಮ ಜಯಂತಿ
- ಕಾರ್ತಿಕ ಅಮಾವಾಸ್ಯೆ ಶ್ರೀ ಶನೀಶ್ವರ ಜಯಂತಿ (ಬ್ಯಾಸಗಿ)ತಿಂಗಳು
- ನಾಗರಪಂಚಮಿ
- ವರಮಹಾಲಕ್ಷ್ಮಿ ಪೂಜೆ
- ಸಿಂಹ ಸಂಕ್ರಮಣದಿಂದ 1 ತಿಂಗಳು ಸೋಣೆ ಆರತಿ ಇರುತ್ತದೆ
- ಗಣೇಶ ಚತುರ್ಥಿ ವಿಶೇಷ ಪೂಜೆ
- ಹೊಸ್ತ್ (ತೆನೆ ಪೂಜೆ)
- 9 ದಿನದ ನವರಾತ್ರಿ ಪೂಜೆ, 10ನೇ ದಿನ ವಿಜಯ ದಶಮಿ
- ದೀಪಾವಳಿ
- ತುಳಸಿ ಪೂಜೆ(ದ್ವಾದಶಿ)
- ಅಮಾವಾಸ್ಯೆ ದೀಪೋತ್ಸವ
ಪ್ರತಿ ತಿಂಗಳ ಹುಣ್ಣಿಮೆಗೆ ದುರ್ಗಾ ಹೋಮ ಇರುತ್ತದೆ ಹಾಗೂ ಪ್ರತಿ ತಿಂಗಳು ಸಾಮೂಹಿಕ ಶನಿಶಾಂತಿ ಇರುತ್ತದೆ