"ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟಿನ ಶ್ರೀ ಶನೀಶ್ವರ ಸ್ವಾಮಿಯ ದೇವಸ್ಥಾನ"ವು ಪುರಾತನ ಶೈಲಿಯಿಂದ ನವೀನ ಶೈಲಿಯ ಆಧುನಿಕ ದೇವಾಲಯವಾಗಿ "ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟಿ" ನಲ್ಲಿ ರೂಪು ತಳೆದು ಶಕ್ತಿತಾಣವಾಗಿ ಮೈದೋರಿ ನಿಂತಿದೆ.
ಇದೀಗ, ದೇವಸ್ಥಾನವು ಸಾಕಷ್ಟು ಅಭಿವೃದ್ಧಿ ಹೊಂದಿದೆ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹುತ್ತ ರೂಪದಲ್ಲಿದ್ದ ಚಿಂಗೋಳಿ ಮರದಡೀಯ ಸುತ್ತ ಕಟ್ಟೆ ಆಕಾರದ ಸ್ಥಾನ ನಿರ್ಮಿಸಿ, ವಿಕ್ರಮಾದಿತ್ಯ ಹಾಗೂ ಬೇತಾಳಕ್ಕೊಂದು ನೆಲೆ ನೀಡಲು ಸಂಬಂಧಪಟ್ಟ ಕುಟುಂಬದೊಡನೇ ದೇಗುಲದ ಜೀರ್ಣೋದ್ಧಾರ ಸಮಿತಿ ಹಾಗೂ ಅಭಿವೃದ್ಧಿ ಮಂಡಳಿ, ಊರ ಹಾಗೂ ಪರ ಊರ ಸದ್ಭಕ್ತರ ನೆರವಿನೊಡನೇ, ಇದೀಗ ತಮ್ಮನ್ನು ತಾವು ದೇವಾಲಯದ ಅಭಿವೃದ್ಧಿ ಪಥದತ್ತ ಸಾಗಿಸುವ ಕಾರ್ಯಕಲಾಪದಲ್ಲಿ ಇನ್ನಷ್ಟು ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಶ್ರೀ ಕ್ಷೇತ್ರದ ದೇವರನ್ನು ನಂಬಿ ಬರುವಂತಹ ಸದ್ಭಕ್ತರ ಅನುಕೂಲಕ್ಕಾಗಿ ದೇಗುಲ ಮತ್ತು, ದೇಗುಲದ ಪ್ರಾಂಗಣದ ಸುತ್ತ-ಮುತ್ತ ಸಾಕಷ್ಟು ಅಗತ್ಯ ಸೌಕರ್ಯದ ಸುಧಾರಣೆಗಳನ್ನು ಜಾರಿಗೆ ತಂದು/ತರುತ್ತಿರುವುದರ ಜೊತೆಗೆ, ಶ್ರೀ ಚೌಡೇಶ್ವರೀ ದೇಗುಲದ ಬಳಿ ಅಡುಗೆ ಕೊಠಡಿ, ಅನ್ನ ದಾಸೋಹ ಛತ್ರ, ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಾಣ ಕಾರ್ಯ, ದೇಗುಲದ ಮುಖಮಂಟಪ, ಕಲ್ಯಾಣ ಮಂಟಪ, ಗೋಶಾಲೆ, ಸುತ್ತು ಪಾಳಿ, ಎದುರು ಭಾಗದ ಕೆರೆ ಅಭಿವೃದ್ಧಿ, ಅಶ್ವತ್ಥ ಮರಕ್ಕೆ ಉಪನಯನ ಮತ್ತು ಲಗ್ನ ಕಾರ್ಯ, ದೇವಸ್ಥಾನದ ಎದುರು ಮೇಲ್ಛಾವಣೆ - ಹೀಗೆಯೇ ದೇವಸ್ಥಾನದ ಹತ್ತು-ಹಲವಾರು ಅಭಿವೃದ್ಧಿ ಕಾರ್ಯಕ್ಕಾಗಿ ತಮ್ಮ ದಕ್ಷ-ಸಮರ್ಥ ಆಡಳಿತದಿಂದ ಶ್ರೀ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಮತ್ತಷ್ಟು ಸತತ-ಪ್ರಯತ್ನವನ್ನು ಆಡಳಿತ ಮಂಡಳಿ ನಿರ್ಧರಿಸಿದೆ. ಮಾತ್ರವಲ್ಲದೇ, ಅದಕ್ಕೇ ಸಂಬಂಧಿಸಿದ ಕಾರ್ಯ-ಕಲಾಪಗಳನ್ನು ಎಡೆಬಿಡದೇ ಕೈಗೆತ್ತಿಕೊಂಡಿದೆ.

ಗೋಶಾಲೆ

ನೂತನ ರಥ ನಿರ್ಮಾಣ
ಭಕ್ತಾದಿಗಳಲ್ಲಿ ಮನವಿ
ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನವು, ಕುಂದಾಪುರ ತಾಲೂಕಿನ, ಕನ್ಯಾನ ಗ್ರಾಮದ ಬಾಡಬೆಟ್ಟು ಎಂಬಲ್ಲಿ ಇದ್ದು, ಬಹಳ ಕಾರಣೀಕ ಸ್ಥಳವಾಗಿದ್ದು, ಈ ಗ್ರಾಮದ ರಕ್ಷಕನೆಂದೇ ಪ್ರಸಿದ್ಧಿಯನ್ನು ಪಡೆದಿರುವುದು. ಈ ದೇವಸ್ಥಾನದ ಸುತ್ತ ಶ್ರೀ ನಾಗದೇವರು ಮತ್ತು ಸಪರಿವಾರ ದೈವಗಳು ಇವೆ. ಈ ದೇವಸ್ಥಾನವು ಊರಿನ ಮಧ್ಯಭಾಗದಲ್ಲಿದ್ದು, ಕುಂದಾಪುರ – ಕೊಲ್ಲೂರು ನಡುವಿನ ರಸ್ತೆಯಲ್ಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರತಿ ಶನಿವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯುತ್ತಿದೆ. , ಊರ, ಪರವೂರ ಹಾಗೂ ಬೇರೆ, ಬೇರೆ ಜಿಲ್ಲೆಗಳಿಂದ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅವರ ಅನುಕೂಲತೆಗೆ ಬೇಕಾಗಿ ವಸತಿಗೃಹ, ದೇವಳಕ್ಕೆ ಬೇಕಾಗಿ ಗೋಶಾಲೆ(ಇದರ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ), ದೇವಳದ ಎದುರುಗಡೆಯಿರುವ ಪುಷ್ಕರಣಿಯ ಜೀರ್ಣೋದ್ಧಾರ, ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಸಭಾಭವನ, ದೇವಳದ ಪೌಳಿ ಹಾಗೂ ಎದುರುಗಡೆ ಇರುವ ಜಾಗಕ್ಕೆ ಮಾಡಿನ ರಚನೆ ಹಾಗೂ ದೇವಳಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಮುಖಮಂಟಪದ ರಚನೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ . ಈ ಎಲ್ಲಾ ಕಾಮಗಾರಿಗಳ ಅಂದಾಜು ವಿವರ ಈ ಕೆಳಗೆ ನೀಡಿದೆ. ತಾವು ತಮ್ಮಿಂದ ಈ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ ದೇಣಿಗೆ ನೀಡುವುದರ ಮೂಲಕ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಪ್ರಾರ್ಥಿಸುತ್ತೇವೆ. ದೇವಳದ ಜೀರ್ಣೋದ್ಧಾರದ ಅಂದಾಜು ವೆಚ್ಚದ ಪ್ರತಿಗಳನ್ನು ಈ ಕೆಳಗೆ ನೀಡಲಾಗಿದೆ.
ಜೀರ್ಣೋದ್ಧಾರದ ಕೆಲಸಗಳ ಅಂದಾಜು ವೆಚ್ಚದ ವಿವರ ಈ ಕೆಳಗಿನಂತಿವೆ.
1. | ಶ್ರೀದೇವಳದ ಗೋಶಾಲೆ ಕಟ್ಟಡ ನಿರ್ಮಿಸುವ ಬಗ್ಗೆ | - | 25,00,000.00 | |
2. | ಭಕ್ತಾದಿಗಳ ಅನುಕೂಲಕ್ಕಾಗಿ ವಸತಿ ಗೃಹ ನಿರ್ಮಿಸುವ ಬಗ್ಗೆ | - | 30,00,000.00 | |
3. | ಶ್ರೀದೇವಳಕ್ಕೆ ಬೇಕಾಗುವ ಸಭಾಭವನ ನಿರ್ಮಾಣದ ಬಗ್ಗೆ | - | 1,59,57,471.00 | |
4. | ಶ್ರೀದೇವಳದ ಪುಷ್ಕರಣಿಯ ಜೀರ್ಣೋದ್ಧಾರದ ಬಗ್ಗೆ | - | 28,00,000.00 | |
5. | ಶ್ರೀದೇವಳದ ಎದುರುಗಡೆ ಮಾಡಿನ ರಚನೆ ಬಗ್ಗೆ | - | 9,00,000.00 | |
6. | ಶ್ರೀ ದೇವಳದ ಮುಖ್ಯ ರಸ್ತೆಗೆ ಮುಖಮಂಟಪದ ರಚನೆ ಬಗ್ಗೆ | - | 12,00,000.00 | |
7. | ಜೆನರೇಟರ್ | - | 3,00,000.00 | |
8. | ಉತ್ಸವ ರಥ (ನಿರ್ಮಾಣ : ರಥಶಿಲ್ಪಿ ಶ್ರೀ ರಾಜಗೋಪಾಲ ಆಚಾರ್ಯ ಕೋಟೇಶ್ವರ) | - | 90,00,000.00 | |
ಒಟ್ಟು | 3,56,57,471.00 |
THE DETAILS OF ESTIMATED COST OF RESTORATION WORKS ARE FOLLOWS
1. | Regarding the construction of Goshala building of Sridevala | - | 25,00,000.00 | |
2. | Regarding construction of residential house for the Convenience of devotees | - | 30,00,000.00 | |
3. | Regarding construction of the auditorium required For sri devala | - | 1,59,57,471.00 | |
4. | About the restoration of pushkarani of sri devala | - | 28,00,000.00 | |
5. | About the structure of truss made in front of Srideva | - | 9,00,000.00 | |
6. | Regarding consruction of porch to the main road of sri devala | - | 12,00,000.00 | |
7. | Genarator | - | 3,00,000.00 | |
8. | Uthsava ratha(Designed By: Ratha Shilpi Shri Rajagopala acharya koteshwara) | - | 90,00,000.00 | |
ಒಟ್ಟು | 3,56,57,471.00 |